FDA/SDA Study Materials

Followers

Sunday, 8 November 2020

Civil Police Constable ET - PST Admit Card Released

Posted by B.B on Sunday, 8 November 2020

 ಸಿವಿಲ್ ಪೋಲಿಸ್ ಕಾನ್ಸ್‌ಟೇಬಲ್ ಇಟಿ-ಪಿಎಸಟಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ :


ಕರ್ನಾಟಕ ಪೊಲೀಸ್ ಇಲಾಖೆಯು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ (ಹೈದರಾಬಾದ್ ಕರ್ನಾಟಕ ಮತ್ತು ನಾನ್ ಹೈದರಾಬಾದ್ ಕರ್ನಾಟಕ ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಹಿಷ್ಣುತಾ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆ ಬರೆದು ಇಟಿ, ಪಿಎಸ್‌ಟಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಕೆಎಸ್‌ಪಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕರ್ನಾಟಕ ಪೊಲೀಸ್ ಇಲಾಖೆಯು 2007 ನಾನ್‌-ಹೈದೆರಾಬಾದ್‌ ಕರ್ನಾಟಕ ಮತ್ತು 558 ಹೈದೆರಾಬಾದ್ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಕಳೆದ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು.

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್‌ (ಪುರುಷ ಮತ್ತು ಮಹಿಳಾ) (2007+558) ಹುದ್ದೆಗಳ ಭರ್ತಿಗಾಗಿ ದಿನಾಂಕ 20-09-2020 ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು.

ಪ್ರಸ್ತುತ ಅಭ್ಯರ್ಥಿಗಳಿಗೆ ET, PST ಪರೀಕ್ಷೆ ನಡೆಸಲಿದ್ದು, ಪ್ರವೇಶ ಪತ್ರದಲ್ಲಿ ನೀಡಲಾದ ದಿನಾಂಕದಂದು ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಹಾಜರಾಗಲು ಸೂಚಿಸಲಾಗಿದೆ.

# ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ..?
ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಈ ಮುಂದಿನ ಲಿಂಕ್ ಗೆ ಭೇಟಿ ನೀಡಿ ‌ http://cpcnhk20.ksp-online.in/ ಗೆ ಭೇಟಿ ನೀಡಿ. ನಂತರ ಪೇಜ್‌ನಲ್ಲಿ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ನಿಮ್ಮ ಪ್ರವೇಶ ಪತ್ರ ಪಡೆದುಕೊಳ್ಳಬಹುದಾಗಿದೆ.

DOWNLOAD

Thanks for Download

Tags : Civil Police Constable ET-PST Admit Card Released , PC , PDF



Previous
« Prev Post

No comments:

Post a comment

Today Newspapers